ನಾ ನಿನ್ನೆ ಪ್ರೀತಿ ಮಾಡಿದ್ದೆ ಕಣೆ ನಿನ್ನೆ ಸರ್ವಸ್ವಾಗಿಸಿದ್ದೆ ಕಣೆ ನನ್ನ ಲೋಕ ಬಿಟ್ಟು ಬಂದಿದ್ದೆ ಕಣೆ ಹೇಳು ಇದು ನನ್ನ ತಪ್ಪಾ ನಿನ್ನ ಪ್ರೀತಿಸಿದ್ದು ನನ್ನ ತಪ್ಪ ಐಶ್ವರ್ಯ ಅಂತಸ್ತು ತಾತ್ಕಾಲಿಕ ಕಣೆ ಪ್ರೀತಿ ಸ್ನೇಹ ಸಂಬಂಧ ನನ್ನ ಲೋಕ ಕಣೆ ಭವನಗಳಿಗಿಂತ ಭಾವನೆಗಳೇ ಬೇಕು ಕಣೆ ಹೇಳು ಇದು ನನ್ನ ತಪ್ಪ ಹೊನ್ನು ಮಣ್ಣಿಗಿಂತ ಮಡದಿಯೇ ಹೆಚ್ಚು ಅಂದಿದ್ದು ತಪ್ಪ.. ಆಗಲು ನೀನು ಬೇಕಿತ್ತು ಈಗಲೂ ನೀನು ಬೇಕು ಕಣೆ ನಿನಗೂ ನಾನೇ ಬೇಕು ಎಂದು ಒಪ್ಪಿಸು ಜಾಣೆ ಘಾಸಿಯಾಗಿದೆ ನನ್ನ ಮನಸು ಮೂಲಾಮಾಗಿ ಬಾ ಮತ್ತೆ ಮಾಮೂಲಾಗಿ ಬೇಡ ಕಣೆ.. ನಂಬಿಕೆ ಕಳೆದುಕೊಂಡಿದೆ ಹೃದಯ ಹೇಳು ಇದು ನನ್ನ ತಪ್ಪ ನನ್ನ ಹೃದಯದ ಆರೈಕೆ ಇಷ್ಟು ದಿನ ನಾನು ಮಾಡಿದ್ದು ತಪ್ಪ ? -ಕಲಾವಿದ