ಕಣ್ಮುಚ್ಚದೆ ಕಾಣುತ್ತಿರುವ ಕನಸೂ ಇದು ಮನ ತಣಿಸುತ್ತಿರುವ ನನಸೋ ಇದು ಕಲಾವಿದನ ಕುಂಚದ ಕಲೆಯಂತಿದೆ ಈ ಜೋಗದ ಸೌಂದರ್ಯ ಕಣ್ಣು ಕಟ್ಟುವಂತಿದೆ ಬರಿಯ ನದಿಯ ನೀರೋ ಇದು ದೇವರ ಅಭಿಷೇಕದ ಹಾಲೋ ಇದು ಭೂತಾಯಿಗೆ ನೈವೇದ್ಯೇ ಮಾಡಿದಂತಿದೆ ಪ್ರಕೃತಿಯು ಸಂತೋಷದಿಂದ ನಲಿದಂತಿದೆ ಮನುಷ್ಯರ ಪಾಪಗಳಿಗೆ ದೇವರ ಆಕ್ರೋಶವೋ ಇದು ಶೋಷಣೆ ತಡೆಯಲಾಗದ ಪರಿಸರದ ಅರ್ತನಾದವೋ ಇದು ಸಿಂಹ ಘರ್ಜನೆಯನ್ನೇ ಅದಗಿಸುವಂತಿದೆ ಈ ನೀರಿನ ಶಬ್ದ ಭಯ ಪಡಿಸುವಂತಿದೆ ಬರಿಯ ಸೃಷ್ಟಿಯ ಭಾಗವೋ ಇದು ಮನುಷ್ಯನಿಗೆ ಪಾಠ ಹೇಳುತ್ತಿರುವ ಗುರುವೋ ಇದು ಎಷ್ಟು ಎತ್ತರಕ್ಕಾದರು ಬೆಳೆದಿರು ಕೊನೆಗೆ ಕೆಳಗೆ ಬೀಳಲೇ ಬೇಕು ಮಣ್ಣಾಗಲೇ ಬೇಕು ಎಂದು ಹೇಳುತ್ತಿದೆ...
ಸಪ್ತ ಸ್ವರಗಳಿಲ್ಲದ ಸಂಗೀತ ಸಂಗೀತವೇ ಅಲ್ಲ ಮನಸೂರೆ ಗೊಳಿಸುವ ಸೌನ್ದರ್ಯವಿಲ್ಲದ ಸುಮವು ಸುಮವೇ ಅಲ್ಲ ಸುಖವಿದ್ದರೇನು... ಸಂಪತ್ತಿದ್ದರೇನು... ನಿಮ್ಮಂತ ಸ್ನೇಹಿತರಿಲ್ಲದ ಜೀವನ ಜೀವನವೇ ಅಲ್ಲ ------------------------------------------------------------------------------------------------------------- ಸೂರ್ಯನಿಗೆ ಭೂಮಿ ಬೇಕೋ ಬೇಡವೋ ಭೂಮಿಗೆ ಸೂರ್ಯನೇ ಬೆಳಕು ಕಣೆ ನೀರಿಗೆ ಮೀನು ಬೇಕೂ ಬೇಡವೋ ಮೀನಿಗೆ ನೀರೆ ಜೀವ ಕಣೆ ನಿನಗೆ ನಾನು ಬೇಕೋ ಬೇಡವೋ ನನಗೆ ನೀನೆ ಉಸಿರು ಕಣೆ :)
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ