ನನ್ನ ಹುಡುಗಿ

ನಾ ಬಯಸುವ ಹುಡುಗಿ
ಆಗಿರಬೇಕು ಕನ್ನಡದ ಬೆಡಗಿ

ಮಿಡಿ ಮಿನಿ ಬೇಡಪ್ಪ
ಸಲ್ವಾರ್ ಸಾರಿನೇ ಬೇಕಪ್ಪ

ಇರಬಾರದು ಸ್ವಲ್ಪಾನು ಗಾಂಚಲಿ
ಸದಾ ನಗುವಿರಬೇಕು ತುಟಿಯಂಚಲಿ

ಇರಲಿ ಹೂವಿನತಹ ಮನಸು
ಇದು ನನ್ನ ಎದೆಯಾಳದ ಕನಸು

ಬಯಸುವೆ ಬೊಗಸೆಯಷ್ಟು ಪ್ರೀತಿ
ಅಂತಹವಳಿಗೆ ನಾನಾಗಬೇಕೆಂದಿರುವೆ ಅಚ್ಚು ಮೆಚ್ಚಿನ ಪತಿ...




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೀನ್ಯಾರೋ ಗೆಳೆಯ ನೀನ್ಯಾರೋ…

ಜೋಗದ ಸಿರಿ

ಎರಡು ಚುಟುಕಗಳು