ದೂರದಿಂದಲೇ ಸವಿಯುವೆ

ನನ್ನಾಣೆ ಚೆಲುವೆ ನೀನೆ ಸೌಂದರ್ಯವಂತೆ
ಆ ಚಂದಿರನು ನಿನ್ನಂತಹವಳನ್ನು ಕಂಡಿಲ್ಲವಂತೆ

ನನ್ನ ಕಣ್ಣುಗಳು ಕಂಡೊಡನೆ ನಿನ್ನನು
ಮನಸು ಕನವರಿಸುವುದು ನಿನ್ನದೇ ಹೆಸರನು
ಅರಿವಿಲ್ಲದೆ ಹಾಡುವೆ ಪ್ರಣಯ ಗೀತೆಗಳನ್ನು
ಕದ್ದಿಹೆಯಲ್ಲೇ ನನ್ನ ಇರುಳಿನ ನಿದ್ದೆಯನು

ಆಹಾ ಮುಳುಗಿರುವೆ ಸ್ವರ್ಗ ಸುಖದ ಅಲೆಯಲ್ಲಿ
ತೂಗಾಡುತ್ತಿರುವೆ ನಿನ್ನ ಸೌಂದರ್ಯದ ಉಯ್ಯಾಲೆಯಲ್ಲಿ
ಪ್ರೀತಿ ಪ್ರೇಮ ಎಂಬ ಬಂಗಾರದ ಬಲೆ ಬೇಡ ನನಗೆ
ನಿನ್ನ ಚೆಲುವನ್ನು ದೂರದಿಂದಲೇ ಸವಿಯುತ್ತಾ ಇರುವೆ ಹೀಗೇ.. :) 

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು