ಭಾನುವಾರ, ನವೆಂಬರ್ 13, 2011

ಹೊಸ ಹಾಡು

ಹೃದಯ ಹೊಸ ಹಾಡನು ಹಾಡುತಿದೆ
ಕಣ್ಣುಗಳು ಮತ್ತೆ ಕನಸನು ಹಾಡುತಿದೆ
ಮನಸು ಕವನವ ಕಟ್ಟುತಿದೆ
ಕಾರಣ ನೀನೆನಾ ಚೆಲುವೆ ನೀನೇನಾ

ಸುತ್ತ ಮುತ್ತ ಮತ್ತೆ ಸುಂದರವಗುತಿದೆ
ನೆನ್ನೆ ಕಾಣದ ಹೂವು ಇಂದು ಕುಣಿಯುತಿದೆ
ಕೋಗಿಲೆಯ ಕೂಗು ಸಂಗೀತವಾಗುತಿದೆ
ಕಾರಣ ನೀನೇನಾ ಚೆಲುವೆ ನೀನೇನಾ


ಮನಸಿನ ಮೇಲಿನ ಹಿಡಿತ ತಪ್ಪುತಿದೆ
ಅದು ಕಣ್ಣಿನ ಮಾತನು ಕೇಳುತಿದೆ
ನಿನ್ನನೇ ನೋಡಲು ಕಾಯುತಿದೆ
ಕಾರಣ ನೀನೇನಾ ಚೆಲುವೆ ನೀನೇನಾ 
ನಿನ್ನ ಸೌಂದರ್ಯಕ್ಕೆ ಇಂದು ಸೋತೆ ನಾ...

ನೀನ್ಯಾರೋ ಗೆಳೆಯ ನೀನ್ಯಾರೋ…


ನೀನ್ಯಾರೋ ಗೆಳೆಯ ನೀನ್ಯಾರೋ???

ತುತ್ತಿಟ್ಟು  ಬೆಳೆಸಿದವನಲ್ಲ 
ಜೀವ ಸವೆಸಿ ಸಾಕಿದವನಲ್ಲ
ನೀನ್ಯಾರೋ ಗೆಳೆಯ ನೀನ್ಯಾರೋ…

ಪಾಠ ಹೇಳಿ ತಿದ್ದಿದವನಲ್ಲ
ಕಾಟ ಕೊಟ್ಟ ಒಡಹುಟ್ಟಿದವನಲ್ಲ 
ನೀನ್ಯಾರೋ ಗೆಳೆಯ ನೀನ್ಯಾರೋ…

ರಕ್ಷಾ ಬಂಧನದಲ್ಲಿ ಬಂದಿಸಿದವ್ನಲ್ಲ
ಪ್ರೀತಿಸಿದ ಪ್ರೆಯಸಿಯಲ್ಲ 
ನೀನ್ಯಾರೋ ಗೆಳೆಯ ನೀನ್ಯಾರೋ…

ಕಣ್ಣೀರಿಟಾಗ  ಅದನೋರೆಸುವ ಕೈಗಳು  
ಒಬ್ಬಂಟಿಯಾದಾಗ ನಿನ್ನ ಮಾತನು ಕೇಳುವ ಕಿವಿಗಳು 
ಮುನಿಸಿಕೊಂಡಿರುವ ಮನಸ ನೋವನು ಅರಿಯುವ ಮನಸು 

ನಾನು ಬೇರೆಯವನಲ್ಲ ಗೆಳೆಯ...
ದೇಹ ಬೇರೆಯಾದರು ಜೀವ ಒಂದೇ!!
ಹೃದಯ ಎರಡಾದರು ಉಸಿರು ನಿನ್ನದೇ !!

ಎರಡು ಚುಟುಕಗಳು

ಸಪ್ತ ಸ್ವರಗಳಿಲ್ಲದ ಸಂಗೀತ
ಸಂಗೀತವೇ ಅಲ್ಲ
ಮನಸೂರೆ ಗೊಳಿಸುವ ಸೌನ್ದರ್ಯವಿಲ್ಲದ ಸುಮವು
ಸುಮವೇ ಅಲ್ಲ
ಸುಖವಿದ್ದರೇನು... ಸಂಪತ್ತಿದ್ದರೇನು...
ನಿಮ್ಮಂತ ಸ್ನೇಹಿತರಿಲ್ಲದ ಜೀವನ ಜೀವನವೇ ಅಲ್ಲ


-------------------------------------------------------------------------------------------------------------


ಸೂರ್ಯನಿಗೆ ಭೂಮಿ ಬೇಕೋ ಬೇಡವೋ
ಭೂಮಿಗೆ ಸೂರ್ಯನೇ ಬೆಳಕು ಕಣೆ
ನೀರಿಗೆ ಮೀನು ಬೇಕೂ ಬೇಡವೋ
ಮೀನಿಗೆ ನೀರೆ ಜೀವ ಕಣೆ
ನಿನಗೆ ನಾನು ಬೇಕೋ ಬೇಡವೋ
ನನಗೆ ನೀನೆ ಉಸಿರು ಕಣೆ :) 

ಮರೆತೆಯಾ ಗೆಳತಿ??

ನಿನ್ನ ಕಂಡ ಆ ಅಮೃತ ಕ್ಷಣದಲಿ
ತಂಗಾಳಿಯಂತೆ ಬೀಸಿ ನನ್ನ ಎದೆಯಲಿ
ನನ್ನನು ತೇಲಿಸಿ ಪ್ರೀತಿಯ ಅಲೆಯಲಿ
ಮರೆತೆಯಾ ಗೆಳತಿ ನೀ ಮರೆತೆಯಾ
ಮರೆತು ಬಿರುಗಾಳಿ ಆದೆಯ!!


ಮಾತನಾಡುವುದನ್ನೇ ಮರೆಸಿ
ನನ್ನ ನೀ ಕವಿಯಾಗಿಸಿ
ಪ್ರೇಮ ಕಾವ್ಯವ ಬರೆಸಿ 
ಮರೆತೆಯಾ ಗೆಳತಿ ನೀ ಮರೆತೆಯಾ
ಮರೆತು ಕವನವ ಕಳೆದೆಯ


ನನ್ನ ಬಾಳಿನ ಹೂದೋಟದಲ್ಲಿ
ನೀ ನೆಟ್ಟ ರೋಜಾ ಗಿಡದಲ್ಲಿ 
ಹೂವೊಂದು ಅರಳುವಷ್ಟರಲ್ಲಿ
ಮರೆತೆಯಾ ಗೆಳತಿ ನೀ ಮರೆತೆಯಾ 
ಮರೆತು ವಿಶ್ವ ಹೊಯ್ದೆಯಾ
ನಮ್ಮ ಪ್ರೀತಿಯ ಹೊಸಕಿ ಕೊಂದೆಯಾ

ಹೆಣ್ಣೆಂಬ ಜಾಲ

ಸೂರ್ಯ ಉದಯಿಸಿದ ದಿನವಾದರೂ ಇರಬಹುದು
ಆಡು ಮುಟ್ಟದ ಸೋಪ್ಪನ್ನಾದರು ಹುಡುಕ ಬಹುದು
ಸಾಗರ ಸೇರದ ನದಿಯಾದರು ಇರಬಹುದು
ಉಪ್ಪು ಸಪ್ಪೆಯಾಗ ಬಹುದು
ಸಕ್ಕರೆ ಕಹಿಯಾಗ ಬಹುದು
ಹೆಣ್ಣೆಂಬ ಮಾಯೆಗೆ ಬಲಿಯಾಗದವನು!! ಇದು ಅಸಾಧ್ಯವಾದುದು

ಮೊದಲು ಗಂದಸನು ಸೃಷ್ಟಿಸಿದ ಆ ದೇವರು
ಸೋಲಿಸಲಾಗಲಿಲ್ಲ ಅವನನ್ನು ಏನು ಮಾಡಿದರು
ಬಿರುಗಾಳಿ ಭೂಕಂಪಕ್ಕೆ ಎದೆ ಕೊಟ್ಟು ನಿಂತನು
ಸೃಷ್ಟಿಸಿದವನಿಗೆ ದೊಡ್ಡ  ಸವಾಲದನು

ಅವನ ಕೊನೆಯ ಸೃಷ್ಟಿಯೇ ಅತಿ ಮಧುರವಾದುದು
ಗಂಡಸನು ಸೋಲಿಸಿದ ಈ ಸೃಷ್ಟಿಯನು ಕರೆದ ಹೆಣ್ಣೆಂದು
ಅವಳ ಮಾತಿನಲ್ಲೇ ಇಟ್ಟ ಮಾಯಲೋಕವನು
ನೋಟದಲಿ ನಶೆಯೇರಿಸುವ ಸೌಂದರ್ಯವನು
ಎದೆಯಲಿಟ್ಟ ಎಂದೂ ಅರ್ಥವಾಗದ ಮನಸನು
ಕೊನೆಗೂ ಈ ವಿಧಿಯಾಟದಲ್ಲಿ ದೇವರು ಗೆದ್ದನು 
ಗಂಡಸು ಹೆಣ್ಣೆಂಬ ಜಾಲದಲ್ಲಿ ಬಿದ್ದನು 

ಅಭಿಮಾನಿ ಕಣೆ

ಅಭಿಮಾನಿ ಕಣೆ ನಾ ನಿನ್ನ ಅಭಿಮಾನಿ
ನಿನ್ನ ಸಾಟಿಯಿಲ್ಲದ ಸೌಂದರ್ಯದ ಅಭಿಮಾನಿ
ನಿನ್ನ ಮಾತಿನ ಮಾಧುರ್ಯದ ಅಭಿಮಾನಿ
ಆ ನಿನ್ನ ನಲಿಯುವ ನಯನಗಳ ಅಭಿಮಾನಿ
ನಿನ್ನ ನಗುವಲ್ಲಿರುವ ಹೊಳಪಿನ ಅಭಿಮಾನಿ
ಅಭಿಮಾನಿ ಕಣೆ ನಾ ನಿನ್ನ ಅಭಿಮಾನಿ

ಈ ಆಕರ್ಷಣೆಯ ಅರ್ಥವನು ನಾ ಅರಿಯಲಾರೆ
ಇದನ್ನು ಪ್ರೀತಿ ಪ್ರೇಮ ಎಂದು ಕರೆಯಲಾರೆ
ಹಾಗೆ ಕರೆದು ನಮ್ಮ ಸ್ನೇಹವನ್ನು ಅವಮಾನಿಸಲಾರೆ
ನಿನ್ನ ಕೋಪವನ್ನು ತಡೆಯಲಾರೆ 
ನಿನ್ನ ವಿರಹವನ್ನು ಸಹಿಸಲಾರೆ
ಅಭಿಮಾನಿ ಕಣೆ ನಾ ನಿನ್ನ ಅಭಿಮಾನಿ 


ಬಯಸುವೆ ನಿನ್ನ ಹೃದಯದಲ್ಲಿ ಒಂದು ಪುಟ್ಟ ಮೂಲೆಯನು
ಸ್ನೇಹದ ಬೆಚ್ಚನೆಯ ಹೊದಿಕೆಯನು 
ನಿನ್ನ ಅಭಿಮಾನಿಗಳ ಪಟ್ಟಿಯಲಿ ವಿಶೇಷ ಸ್ಥಾನವನ್ನು 
ಇಷ್ಟು ಸಾಕು ಕಣೆ ಕಳೆಯಲು ಈ ಜನುಮವನು 
ಅಭಿಮಾನಿ ಕಣೆ ನಾ ನಿನ್ನ ಅಭಿಮಾನಿ 

ಜೋಗದ ಸಿರಿ

ಕಣ್ಮುಚ್ಚದೆ ಕಾಣುತ್ತಿರುವ ಕನಸೂ ಇದು
ಮನ ತಣಿಸುತ್ತಿರುವ ನನಸೋ ಇದು
ಕಲಾವಿದನ ಕುಂಚದ ಕಲೆಯಂತಿದೆ
ಈ ಜೋಗದ ಸೌಂದರ್ಯ ಕಣ್ಣು ಕಟ್ಟುವಂತಿದೆ


ಬರಿಯ ನದಿಯ ನೀರೋ ಇದು
ದೇವರ ಅಭಿಷೇಕದ ಹಾಲೋ ಇದು
ಭೂತಾಯಿಗೆ ನೈವೇದ್ಯೇ ಮಾಡಿದಂತಿದೆ
ಪ್ರಕೃತಿಯು ಸಂತೋಷದಿಂದ ನಲಿದಂತಿದೆ


ಮನುಷ್ಯರ ಪಾಪಗಳಿಗೆ ದೇವರ ಆಕ್ರೋಶವೋ ಇದು
ಶೋಷಣೆ ತಡೆಯಲಾಗದ ಪರಿಸರದ ಅರ್ತನಾದವೋ ಇದು
ಸಿಂಹ ಘರ್ಜನೆಯನ್ನೇ ಅದಗಿಸುವಂತಿದೆ
ಈ ನೀರಿನ ಶಬ್ದ ಭಯ ಪಡಿಸುವಂತಿದೆ


ಬರಿಯ ಸೃಷ್ಟಿಯ ಭಾಗವೋ ಇದು
ಮನುಷ್ಯನಿಗೆ ಪಾಠ ಹೇಳುತ್ತಿರುವ ಗುರುವೋ ಇದು
ಎಷ್ಟು ಎತ್ತರಕ್ಕಾದರು ಬೆಳೆದಿರು
ಕೊನೆಗೆ ಕೆಳಗೆ ಬೀಳಲೇ ಬೇಕು ಮಣ್ಣಾಗಲೇ ಬೇಕು ಎಂದು ಹೇಳುತ್ತಿದೆ...