ಮೋಡಿ

 ಹುಡುಗಿ ಎಂಬ ಮೋಡಿ
ಎಷ್ಟು ಚಮತ್ಕಾರಿ ನೋಡಿ
ಕುಂಟ ಓಡಿದ
ಕುರುಡ ನೋಡಿದ
ಮೂಗ ಹಾಡಿದ
ಕಟುಕ ಕವಿಯಾದ

ಹುಡುಗಿ ಎಂಬ ಮೋಡಿ
ಎಷ್ಟು ಅಪಾಯಕಾರಿ ನೋಡಿ
ಸ್ನೇಹಿತ ಸ್ನೇಹ ಬಿಟ್ಟ
ಸನ್ಯಾಸಿ ಕಾವಿ ಬಿಟ್ಟ
ವಿದ್ಯಾರ್ಥಿ ಓದು ಬಿಟ್ಟ
ಕವಿಯು ಕುಡಿದು ಕೆಟ್ಟ


ಹುಡುಗಿ ಎಂಬ ಮೋಡಿ
ಎಷ್ಟು ಪರೋಪಕಾರಿ ನೋಡಿ
ಗಂಡನಿಗೆ ಮಾಡದಿಯಾಗುವಳು
ಮಕ್ಕಳಿಗೆ ತಾಯಿಯಾಗುವಳು
ಮನೆತನಕ್ಕೆ ಕಣ್ಣಾಗುವಳು
ಪರರಿಗೆ ಜೀವನ ಮುಡುಪಾಗಿಡುವಳು

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು