ಮರುಳಾಗ ಬೇಡ

ಆಹಾ ಸ್ವತಂತ್ರನಾಗಿ ಬಿಟ್ಟೆ
ಹುಚ್ಚು ಆಸೆಗಳಿಂದ ದೂರವಾಗಿ ಬಿಟ್ಟೆ
ಕಲ್ಪನಾಲೋಕದಿಂದ ಆಚೆ ಬಂದು ಬಿಟ್ಟೆ
ಹಲವಾರು ಸತ್ಯಗಳನ್ನು ಅರಿತು ಬಿಟ್ಟೆ

ಗೆಳೆಯ ಈ ನನ್ನ ಮಾತು ಮರೆಯ ಬೇಡ
ಚಿನ್ನವನ್ನು ಓರೆಗಲ್ಲಿಗೆ ಉಜ್ಜುವುದು ಮರೆಯಬೇಡ
ಸುವಾಸನೆಯಿಲ್ಲದ ಹೂವನ್ನು ಬಯಸ ಬೇಡ
ಬರಿಯ ಬಾಹ್ಯ ಸೌಂದರ್ಯಕ್ಕೆ ಮರುಳಾಗ ಬೇಡ

ನಿನ್ನ ಮನಸು ಹೆಚ್ಚು ಚಂಚಲವಾಗದಿರಲಿ
ಪ್ರತಿ ಹೆಜ್ಜೆಯಲೂ ನಿಗಾ ಇರಲಿ
ನಿನ್ನ ಗೌರವಕ್ಕೆ ಧಕ್ಕೆ ಬರದಂತಿರಲಿ 
ಈ ನನ್ನ ಮಾತುಗಳು ನಿನ್ನ ಮನಸ್ಸಿನಲ್ಲಿರಲಿ...

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು