ಮಾದಕ ದ್ರವ್ಯ

ಬೀಯರ್ ವ್ಹಿಸ್ಕಿ ವೋಡ್ಕಾ ವಿಷಯ ಇದು
ದೇವರ ಪೂಜೆ ಇಲ್ಲದೆ ಸಿಗುವ ತೀರ್ಥ ಇದು

ಭಕ್ತಿಯೇ ಇಲ್ಲದೆ ಸ್ವರ್ಗದ ದಾರಿ ತೋರಿಸುತ್ತದೆ ಇದು
ಸ್ನೇಹ ತಿಳಿಯದವನಿಗೆ ಸ್ನೇಹಿತ ಇದು
ಪ್ರೇಮಿಗೆ ಪ್ರೀತಿಸುವ ಹುಡುಗಿ ಇದು
ಮನಸು ಮುರಿದವನಿಗೆ ಅವಳ ಮರೆಸುವ ಮಾದಕ ದ್ರವ್ಯ ಇದು

ವಿಧುರನಿಗೆ ವಿಧಿವಶವಗಿರುವ ಹೆಂಡತಿ ಇದು
ಸಾಯಲು ಬಯಸುವವನಿಗೆ ಪಾಷಾಣ ಇದು
ಮಿತಿ ಮೀರಿದರೆ ಪ್ರಾಣ ತೆಗೆಯುವ ವೈರಿ ಇದು
ಕುಡುಕರಿಗೆ ಅರ್ಪಿತವಾಗಿರಿವ ಪುಟ್ಟ ಕವನವಿದು..

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು