ಗಿಳಿಯ ಕೂಗು

ಮರವೊಂದರ ಮುಂದೆ ಕುಳಿತು ಓದುತಿದ್ದೆ
ವಿಜ್ಞಾನ ವಿಷಯವೊಂದರಲ್ಲಿ ನಾನು ಮುಳುಗಿದ್ದೆ


ಎದುರಿನ ಮರದಿಂದ ಒಂದು ಹಕ್ಕಿ ಕೂಗಲಾರಂಭಿಸಿತು
ಪುಸ್ತಕದಿಂದ ನನ್ನನು ಹೊರಗೆ ಎಳೆಯಿತು


ಗಿಳಿಯೊಂದು ಮರದ ಮೇಲೆ ಕಂಡಿತು
ರೆಕ್ಕೆ ಬಡಿಯುತ್ತಿತ್ತು..ಕೊಂಬೆಯಿಂದ ಕೊಂಬೆಗೆ ಹಾರುತ್ತಿತ್ತು


ತನ್ನ ಕತ್ತನ್ನು ಸುತ್ತಲು ತಿರುಗಿಸುತ್ತಿತ್ತು
ಅದರ ಧ್ವನಿಯಲ್ಲಿ ಏನೋ ಚಡಪಡಿಕೆ ಇತ್ತು

ತನ್ನ ದುಃಖವನು ಕೂಗಿ ಹೇಳುತ್ತಿತ್ತೋ
ಸಂತಸ ಹಂಚಿಕೊಳ್ಳಲು ಸಂಗಾತಿಯನ್ನು ಕರೆಯುತ್ತಿತ್ತೋ
ಅರ್ಥ ಮಾಡಿಕೊಳ್ಳುವ ನನ್ನ ಪ್ರಯತ್ನ ವ್ಯರ್ಥವಾಗಿತ್ತು
ಅದರ ಮಾತುಗಳು ನನಗೆ ಬರಿಯ ಹಕ್ಕಿಯ ಕೂಗಾಗಿತ್ತು


ವಿಜ್ಞಾನ ಎಷ್ಟು ಮುಂದುವರಿದರೆ ಏನು 
ನಿಮಗೆಂದಾದರು ಅವುಗಳ ಭಾವನೆ ಅರ್ಥವಾಗಿದೆಯೇನು??

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು