ಪರೀಕ್ಷೆ

ಇದೆಂಥ ವಿಧಿಯಾಟವಯ್ಯ??
ನಮ್ಮ ಅಪರಾಧವಾದರೂ ಏನಯ್ಯ?
ಕೇಳಲಿಲ್ಲ ಬಯಸಲಿಲ್ಲ
ಆಸೆ ಪಡಲಿಲ್ಲ
ಬಾ ಎಂದು ಕರೆಯಲಿಲ್ಲ
ಆದರು ಬಂತು ಪರೀಕ್ಷೆ ಭೂತದಂತೆ
ಕರೆಯದೆ ಬರುವ ಅತಿಥಿಯಂತೆ

ಓದ ಬೇಕು ನಿದ್ದೆಯಾ ಬಿಟ್ಟು
ನಮ್ಮ ಆಸೆಗಳ ಸೈಡಿಗೆ ಇತ್ತು
ಆದರೆ ಬರುವ ರಿಸಲ್ಟ್ ಎಷ್ಟು ಚೆಂದ!!
ಒಂದೆರಡು ಬ್ಯಾಕ್ಗಳು ಹೆಚ್ಚಿಸುವುದು ಇದರ ಅಂದ
ಈ ಪರೀಕ್ಷೆ ಎಂಬ ಶಿಕ್ಷೆ ಯಾವ ತಪ್ಪಿಗೆ?
ಪರಿಹಾರವಿಲ್ಲವೇ ನಮ್ಮ ಈ ಕಷ್ಟಕ್ಕೆ??

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು