ಚಾಂದಿನಿ ಬಾರಿನವಳ

ಇವಳೇನಾ ನನ್ನ ಕನಸಲಿ ಬಂದವಳು??
ಹುಣ್ಣಿಮೆಯ ರಾತ್ರಿಯಲಿ ಒಬ್ಬಳೇ ನಿಂದವಳು


ಹಳದಿ ಸೀರೆಯಲಿ ಕಂಗೊಲಿಸುತಿಹಳು
ಬೆಳದಿಂಗಳ ಬಾಳೆಯಂತೆ ಕಂಡವಳು
ಚಂದನದ ಗೊಂಬೆಯಂತೆ ಕಾಣುತಿಹಳು
ನನ್ನನು ಹತ್ತಿರ ಸೆಳೆಯುತಿಹಳು


ಹತ್ತಿರ ಹೋದರೆ ಆಘಾತ ನೀಡಿದಳು
ಮೈ ಮುಚ್ಚುವ ಸೆರಗನು ಕೆಳಗೆ ಜಾರಿಸಿದಳು 
ನಕ್ಕು ನಲಿದು ಬರುತ್ತೀಯ ಎಂದಳು
ಬೇಡ ಗುರು ಇಂತಹ ಗೋಳು
ತಡವಾಗಿ ತಿಳಿಯಿತು ಅವಳು ಚಾಂದಿನಿ ಬಾರಿನವಳು

ಹೇಳುತ್ತವೆ ನೀತಿ ಇಂತಹ ಕತೆಗಳು
ದೂರದಿಂದ ಮಾತ್ರ ನುಣುಪು ಬೆಟ್ಟಗಳು
ಹತ್ತಿರ ಹೋದರೆ ಬರಿ ಕಲ್ಲುಗಳು
ಟೈಮ್ ಪಾಸ್ಗೆ ಬರಿಯುವೆ ಇಂತಹ ಕವನಗಳು 

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು