ಮೌನ ಗುಲಾಬಿ

ನಮ್ಮ ತೋಟದಲ್ಲಿ ಅರಳಿರುವ ಗುಲಾಬಿ ಗಿಡವನ್ನು ನೋಡಿದೆ
ಅದರೊಂದಿಗೆ ಒಂದೆರಡು ಮಾತನಾಡಿದೆ 

ಓ ಗುಲಾಬಿಯೇ..
ಬಿಸಿಲು ಇರುವಾಗ ನಿನ್ನ ಕಾಂತಿ ಕಂಡಿತು
ನೀರು ಚುಮುಕಿಸಿದಾಗ ನಿನ್ನ ಅಂದ ಹೆಚ್ಚಿತು
ನನ್ನ ಮನಸಿನಲೊಂದು ಸಂದೇಹವಿದೆ
ರೋಜ ನಿನ್ನ ಉತ್ತರ ಜನಕ್ಕೆ ಅವಶ್ಯಕತೆ ಇದೆ
ಸುತ್ತಲೂ ಮುಳ್ಳಿದ್ದರೂ ನೀನು ನಗುತಲೆ ಇರುವೆ
ನಿನಗೆ ಏನು ಚಿಂತೆಯೇ ಇಲ್ಲವೆ?

ಎಷ್ಟು ಕೇಳಿದರು ಗುಲಾಬಿ ಉತ್ತರಿಸಲೇ ಇಲ್ಲ
ನಗುವುದು ಅದು ನಿಲ್ಲಿಸಲೇ ಇಲ್ಲ 
ಗುಲಾಬಿಯು ಬರಿಯ ಪ್ರೇಮದ ಸಂಕೇತವಲ್ಲ
ಎಷ್ಟು ಕಷ್ಟವಿದ್ದರು ನಗುತಿರು ಎಂದು ಹೇಳಿಕೊಡುತ್ತಿದೆಯಲ್ಲ :) 

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು