ಜೋಗದ ಸಿರಿ

ಕಣ್ಮುಚ್ಚದೆ ಕಾಣುತ್ತಿರುವ ಕನಸೂ ಇದು
ಮನ ತಣಿಸುತ್ತಿರುವ ನನಸೋ ಇದು
ಕಲಾವಿದನ ಕುಂಚದ ಕಲೆಯಂತಿದೆ
ಈ ಜೋಗದ ಸೌಂದರ್ಯ ಕಣ್ಣು ಕಟ್ಟುವಂತಿದೆ


ಬರಿಯ ನದಿಯ ನೀರೋ ಇದು
ದೇವರ ಅಭಿಷೇಕದ ಹಾಲೋ ಇದು
ಭೂತಾಯಿಗೆ ನೈವೇದ್ಯೇ ಮಾಡಿದಂತಿದೆ
ಪ್ರಕೃತಿಯು ಸಂತೋಷದಿಂದ ನಲಿದಂತಿದೆ


ಮನುಷ್ಯರ ಪಾಪಗಳಿಗೆ ದೇವರ ಆಕ್ರೋಶವೋ ಇದು
ಶೋಷಣೆ ತಡೆಯಲಾಗದ ಪರಿಸರದ ಅರ್ತನಾದವೋ ಇದು
ಸಿಂಹ ಘರ್ಜನೆಯನ್ನೇ ಅದಗಿಸುವಂತಿದೆ
ಈ ನೀರಿನ ಶಬ್ದ ಭಯ ಪಡಿಸುವಂತಿದೆ


ಬರಿಯ ಸೃಷ್ಟಿಯ ಭಾಗವೋ ಇದು
ಮನುಷ್ಯನಿಗೆ ಪಾಠ ಹೇಳುತ್ತಿರುವ ಗುರುವೋ ಇದು
ಎಷ್ಟು ಎತ್ತರಕ್ಕಾದರು ಬೆಳೆದಿರು
ಕೊನೆಗೆ ಕೆಳಗೆ ಬೀಳಲೇ ಬೇಕು ಮಣ್ಣಾಗಲೇ ಬೇಕು ಎಂದು ಹೇಳುತ್ತಿದೆ...ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು