ಹುಡುಗನ ಮನ

ಯಾಕೆ ಹುಡುಗನ ಮನಸು ಹಿಂಗಾಡತ್ತೆ  ??
ನಮ್ಮ ಮಾತನ್ನು ಅದು ಯಾಕೆ ಕೇಳಲ್ಲ ಅನ್ನತ್ತೆ??
ಕಟ್ಟಿಕೊಳತ್ತೆ ಪ್ರೀತಿಯೆಂಬ ಹಕ್ಕಿಯ ಗೂಡು
ಆ ಹಕ್ಕಿಯು ಕಾಗೆಯೋ ಕೋಗಿಲೆಯೋ ತಿಳಿದುಕೊಳ್ಳುವ ಶಕ್ತಿಯಿಲ್ಲ ನೋಡು!!


ಹುಡುಗಿಯ ಮನಸು ಮೀನಿನ ಹೆಜ್ಜೆಯಂತೆ
ಹುಡುಗನ ಮನಸು ಅದಕೆ ಬಲಿಯಾಗುವ ಹುಳುವಿನಂತೆ
ಹುಡುಗನ ಮನಸು ಒಂದು ಹುಚ್ಚು ಕುದುರೆ
ಅದಕೆ ಲಗಾಮು ಹಾಕುವ ಕಲೆ ಹೇಳಿಕೊಡುವವರಿರುವರೆ?

ನನ್ನ ಮನಸಿನಲ್ಲಿ ನನ್ನ ಮನಸಿನ ಬಗ್ಗೆಯೇ ಹಲವಾರು ಪ್ರಶ್ನೆ
ಇದಕೆಲ್ಲ ಉತ್ತರ ಆ ಬ್ರಹ್ಮನಾದರು ತಿಳಿದಿಹನೆ?? 
ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು