ನೀನೆಷ್ಟು ಕ್ರೂರಿ

ಓ ದೇವರೆ..
ನೀನೆಷ್ಟು ಕ್ರೂರಿ
ಅರ್ಥವಾಗದು ನಿನ್ನ ಸೃಷ್ಟಿಯ ಪರಿ
ಸುಂದರ ಗುಲಾಬಿ ಸೃಷ್ಟಿಸಿದೆ
ಅದರೊಂದಿಗೆ ಚುಚ್ಚುವ ಮುಳ್ಳು ಸೃಷ್ಟಿಸಿದೆ
ಬೆಂಕಿ ಬೆಳಕು ಕೊಡುವಂತೆ ಮಾಡಿದೆ
ಮುಟ್ಟಿದರೆ ಸುಡುವಂತೆ ಮಾಡಿದೆ
ಪ್ರೀತಿಸುವ ಹೃದಯ ಕೊಟ್ಟೆ
ಅದೇ ಹೃದಯದಲ್ಲಿ ಅಪ್ಪ ಅಮ್ಮನ ಪ್ರೀತಿಯೂ ಇಟ್ಟೆ
ಒಂದನ್ನು ಸುಖಕ್ಕಾಗಿ ಆರಿಸಿ
ಅದರೊಂದಿಗೆ ದುಃಖ ಅನುಭವಿಸಲಾರೆ
ಯಾಕೆ ಈ ದ್ವಂದ್ವದ ಆಟ
ಅರ್ಥವಾಗದು ನಿನ್ನ ಸೃಷ್ಟಿಯ ಆಟ!!  

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು